ನನ್ನ ಪ್ರೀತಿಯ valentineಗೆ...

ಸಾಲು ಸಾಲು ಮಾವಿನ ತೋಪಿಗೆ
ವಸಂತ ಮುತ್ತಿಕ್ಕಿ ಮೊಗ್ಗರಳಿಸಿದಾಗ
ರತಿಲಾಲಾಪನೆ ಕೋಗಿಲೆಯದು...
ಅಂದಕಾರದ ಅಂತರಾಳದಿಂದ -
ವೀಣೆ ಮೀಟಿದಂತ ಶಬ್ದ..
ವಿರಹ ವೇದನೆಯೋ .. ಅದುಮಿಟ್ಟ -
ಬಾವನೆಗಳ ಸುರಿಮಳೆಯೋ...

ವಸಂತನೆಡೆಗೆ ಉಲಿಯುವುದು
ಕೋಗಿಲೆ ಕಾನನದಲ್ಲಿ..
'ನನ್ನ ಪ್ರೀತಿ ನೀನೆಂದು'..
ಹರೆಯಕ್ಕೆ ಕಿಚ್ಚಿಟ್ಟ ದಿನವೇ,
ಹೃದಯದಿ ಬಚ್ಚಿಟ್ಟವ ನಾ..
ನನಗೆಲ್ಲಿ ಬರಬೇಕು ?,
ಕೋಗಿಲೆಯ ಸಹನೆ, ತಾಳ್ಮೆ...

ಕೋಗಿಲೆಗೆ ವರುಷಕ್ಕೊಮ್ಮೆ ಪ್ರೀತಿಯ ನೆನಪು
ವಸಂತ ಚಿಗುರಿದಾಗ, ಮೊಗ್ಗರಳಿಸಿದಾಗ..
ನನ್ನ ಮನ ಹಾಗಲ್ಲ .. !
ಮಳೆ ನಿಂತಿದ್ದಕ್ಕೂ, ಕೆರೆ ಕೊಳ ತುಂಬಿದ್ದಕ್ಕೂ..
ಬಾರವಾಗುವುದು ಹೃದಯ -
ನಿನ್ನ ನೆನಪಿಸುತ್ತಾ..

ಸೌಂದರ್ಯಕ್ಕೆ ಪೃಜ್ಞೆ ಇದ್ದಿದ್ದರೆ
ವಸಂತ ಬರುತ್ತಿರಲಿಲ್ಲ ವರ್ಷಕ್ಕೊಮ್ಮೆ..
ಪ್ರತಿನಿತ್ಯ ವಸಂತದ ತುಂತುರು !,
ಕೋಗಿಲೆಯಾಲಾಪನೆ ಪ್ರತಿಕ್ಷಣ !,
ಪ್ರೇಮಿಗಳ ಹಾಡು ನಿತ್ಯನೂತನ..
ಆದರೆ ಇಹ ಗುರುತಿಸಿದ್ದೊಂದೇ ದಿನ...
ಪ್ರೇಮಯಾಚಿಸಲಿಕ್ಕೆ., ನೀಡಲಿಕ್ಕೆ.,
Happy Valentine Day

ಪ್ರೀತಿ ಶಾಶ್ವತ ಗೆಳತಿ..
ಕೋಗಿಲೆಯ ಕಲರವದ ಹಾಗೆ..
ಪ್ರೀತಿಯ ಉತ್ತುಂಗ ಅರಿಯೆ ನಾ..
ನಾಂದಿ ಹಾಡುವ ಅನುಭವ ಮಾತ್ರ..
ಮುಗಿಯಲೊಲ್ಲದು ನಿನ್ನೆಡೆಗಿನ ಪ್ರೀತಿ
ಮುಗಿದಾಗ ಬಣ್ಣಗೆಟ್ಟ ರಕ್ತ
ಅಪ್ಪುವುದು ನೀಲಿ...

ಇಂತಿ ನಿನ್ನ ಪ್ರೀತಿಯ..

ಸಾಂತ್ವನ.

ಮುಸ್ಸಂಜೆ ಹೊತ್ತಲ್ಲಿ

ಮುಂಗಾರು ಮಳೆಯಲ್ಲಿ

ನಿನ್ನನ್ನ ನೆನೆಯುತ್ತಾ

ಕಾಫೀಯಾ ಸವೆಯುತ್ತಾ

ಕಾಲವೇ ಸುಂದರ !


ಹಬೆಯಾಡೋ ಕಾಫಿಯು

ತುಟಿಯಂಚಲ್ಲಿ ಉಳಿಸಿದ

ಕಾಫಿಯ ನೆನಪನ್ನ

ಎನ್ನ ತುಟಿಯಲ್ಲಿ ಸವಿಯುವ

ಮನದಾಸೆ ಮೂಡಿದೆ...

ಮುದ್ದಾದ ಹುಡುಗಿಯ

ಮುಂಗುರುಳ ಲಾಸ್ಯಕ್ಕೆ

ಹಾಡದ ಮನಸ್ಸನ್ನ

ಹಿಡಿದಿಡಿದು ಕೂರಿಸೋದೆ

ಇಷ್ಥಾತಿ ಕಷ್ಟವೋ !

ಮುಸ್ಸಂಜೆ ಸೂರ್ಯನ

ಕೆಂಪಿಗೆ ಕೆಂಪಾದ

ಹುಡುಗಿಯ ಗಲ್ಲದ ಕುಳಿಯಲ್ಲಿ ..

ನನ್ನನ್ನೇ ನಾ ಮರೆತು

ಮುಳುಗುವ ಆಸೆಯು..

ಮಳೆ ಹನಿ ಮೊಸದಿ

ಹಾರುತ್ತ ಗಾಳಿಗೆ ತೋರುತ್ತ,

ನನ್ನವಳೆದೆಯ ಮುಟ್ಟುವ ಭಾಗ್ಯವು ಇಲ್ಲದೆ -

ಒದ್ದಾಡೋ ಮನಸ್ಸಿಗೆ..

ಬೇಡವೇ ಸಾಂತ್ವನ.

ಹಾಡಾಢೊ ಮನಸ್ಸಿನ

ನೆಮ್ಮದಿ ಕಳೆಯಲು

ಬೇಗನೆ ಓಡುವ

ಸಮಯವೂ ನಿಲ್ಲಬಾರದೇ ...

ಇದ್ಯಾತರ ನ್ಯಾಯ

ಸೆಳೆದುಕೊಂಡಿದೆ
ಪ್ರೀತಿಯೆಂಬ ಮಾಯೆ .. ?
'ಕಣ್ಕಾಣಿಸದ ಮನಸ್ಸನ್ನು' .,
ಬಿಡಿಸಿಕೊಡು ಗೆಳತಿ-
ಅರಿವಿಲ್ಲದೆ ತೊಡರಿ ಕೊಂಡೆನೆಂದರೆ -
ಮತ್ತಷ್ಟು ಬಿಗಿ ಮಾಡುವುದೇ !!!

ಚಿರಂಜೀವಿ

ಸತ್ತು ಹೋದಾವು -
ಭಾವನೆಗಳು ಎಂಬ
ಭಯಕ್ಕೆ ಬರೆಯುತ್ತಿದ್ದೆ ..
ಈಗೀಗ ಭಾವನೆಗಳೇ
ಉಕ್ಕುತ್ತವೆ ಸತ್ತು ಹೋದೇವು
ಎಂಬ ಭಯಕ್ಕೆ ...

ಅಲೆಮಾರಿ

ಮುರಿದ ಕನಸಿನ
ಚೂರುಗಳ ಹಿಡಿದು
ಬೀದಿ ಬೀದಿ ಅಲೆಯುತಿದ್ದೇನೆ .,
ನಿನ್ನ ಪ್ರತಿಬಿಂಬ ಕಾಣಿಸಿತೆಂಬ
ನಿರೀಕ್ಷೆಯಲ್ಲಿ ..

ಇಂತಿ ನಿನ್ನ ಪ್ರೀತಿಯ

ಬದುಕು ಖಾಲಿ ಕಾಗದವಲ್ಲ
ವಿಧಿ ಬರೆದರೆ ಉಂಟು
ಇಲ್ಲದಿದ್ದರೆ ಇಲ್ಲ

ಖಾಲಿ ಕಾಗದ

ಖಾಲಿ ಕಾಗದಕ್ಕೇನು ಗೊತ್ತು
ಚುಕ್ಕಿ ಇಟ್ಟರೂ ಮೈಲಿಗೆಯೇ ..!
ಚಿತ್ತಾರ ಬಿಡಿಸಿದರೂ ಮೈಲಿಗೆಯೇ..!
ಮಾಡಿಯಾದ ಕ್ಯೆಗಳ ಚಿತ್ತವಷ್ಟೇ ..

ಕುವೆಂಪು - ಭಾವಚಿತ್ರಗಳ ಸಂಕಲನ

ಭಾವನೆಗಳ ತುಡಿತ

ನೆನಪುಗಳ ಬೀದಿಯಲ್ಲಿ ಕಳೆದುಹೋಗಬೇಡ ಗೆಳತಿ
ಬೆಚ್ಚನೆಯ ಮನಸ್ಸಿದೆ.,
ಕನಸಾಗಬೇಡ ನನಸಾಗಿರು ನನ್ನ ಮುದ್ದು ಮನದಿ..
===============================
ಸ್ನೇಹ ಒ೦ದು ಕವನ.,
ನೂರೊ೦ದು ಭಾವನೆಗಳ ಮಿಲನ.
ಬದುಕಿನ ಜ೦ಜಾಟದಲ್ಲಿ ಬೇಸತ್ತ ಮುಗ್ದಮನಸ್ಸಿಗೆ -
ತ೦ಪೆರೆಯುವ ಅಮೃತಸಿ೦ಚನ
===============================
ಸುಖಕ್ಕಾಗಿ ಹಂಬಲಿಸು , ದುಃಖಕ್ಕಾಗಿ ಚಿಂತಿಸಬೇಡ
ಸುಖದಲ್ಲಿ ನನ್ನ ನೆನೆಯದಿದ್ದರೂ ಚಿಂತೆಯಿಲ್ಲ
ದುಃಖದಲ್ಲಿ ಕರೆ., ಸಾದ್ಯವಿದೆ ಸ್ವಲ್ಪ ಮಟ್ಟಿಗೆ ತಣಿಸಲು ..
===============================
ಭಾವ ತುಂಬಿದ ಮನದೊಳಗೆ
ರಂಗು ರಂಗಾಗಿ ಚಿಮ್ಮುವ ಭಾವನಾತ್ಮಕ ಚಿಲುಮೆ ಸ್ನೇಹ
ಭಾವನೆಗಳ ತುಡಿತಕ್ಕೆ ಸ್ಪಂದಿಸುವುದೇ ಸ್ನೇಹ
===============================
ನಸುಕಿನ ಮುಂಜಾನೆಯ ಮುಸುಕನ್ನು
ತೂರಿಬಂದು ಹೊಂಗಿರಣ ಬೆಳಗಾಯ್ತು
ಬಾಳಿನ ಬೇಸರವ ಕರಗಿಸಿ
ನಗು ಮೂಡಿಸಿತು ನಿನ್ನ ಸ್ನೇಹಕಿರಣ

ನಿನ್ನದೇ ಧ್ಯಾನ