ಇದ್ಯಾತರ ನ್ಯಾಯ

ಸೆಳೆದುಕೊಂಡಿದೆ
ಪ್ರೀತಿಯೆಂಬ ಮಾಯೆ .. ?
'ಕಣ್ಕಾಣಿಸದ ಮನಸ್ಸನ್ನು' .,
ಬಿಡಿಸಿಕೊಡು ಗೆಳತಿ-
ಅರಿವಿಲ್ಲದೆ ತೊಡರಿ ಕೊಂಡೆನೆಂದರೆ -
ಮತ್ತಷ್ಟು ಬಿಗಿ ಮಾಡುವುದೇ !!!

ಚಿರಂಜೀವಿ

ಸತ್ತು ಹೋದಾವು -
ಭಾವನೆಗಳು ಎಂಬ
ಭಯಕ್ಕೆ ಬರೆಯುತ್ತಿದ್ದೆ ..
ಈಗೀಗ ಭಾವನೆಗಳೇ
ಉಕ್ಕುತ್ತವೆ ಸತ್ತು ಹೋದೇವು
ಎಂಬ ಭಯಕ್ಕೆ ...

ಅಲೆಮಾರಿ

ಮುರಿದ ಕನಸಿನ
ಚೂರುಗಳ ಹಿಡಿದು
ಬೀದಿ ಬೀದಿ ಅಲೆಯುತಿದ್ದೇನೆ .,
ನಿನ್ನ ಪ್ರತಿಬಿಂಬ ಕಾಣಿಸಿತೆಂಬ
ನಿರೀಕ್ಷೆಯಲ್ಲಿ ..

ಇಂತಿ ನಿನ್ನ ಪ್ರೀತಿಯ

ಬದುಕು ಖಾಲಿ ಕಾಗದವಲ್ಲ
ವಿಧಿ ಬರೆದರೆ ಉಂಟು
ಇಲ್ಲದಿದ್ದರೆ ಇಲ್ಲ

ಖಾಲಿ ಕಾಗದ

ಖಾಲಿ ಕಾಗದಕ್ಕೇನು ಗೊತ್ತು
ಚುಕ್ಕಿ ಇಟ್ಟರೂ ಮೈಲಿಗೆಯೇ ..!
ಚಿತ್ತಾರ ಬಿಡಿಸಿದರೂ ಮೈಲಿಗೆಯೇ..!
ಮಾಡಿಯಾದ ಕ್ಯೆಗಳ ಚಿತ್ತವಷ್ಟೇ ..

ಕುವೆಂಪು - ಭಾವಚಿತ್ರಗಳ ಸಂಕಲನ

ಭಾವನೆಗಳ ತುಡಿತ

ನೆನಪುಗಳ ಬೀದಿಯಲ್ಲಿ ಕಳೆದುಹೋಗಬೇಡ ಗೆಳತಿ
ಬೆಚ್ಚನೆಯ ಮನಸ್ಸಿದೆ.,
ಕನಸಾಗಬೇಡ ನನಸಾಗಿರು ನನ್ನ ಮುದ್ದು ಮನದಿ..
===============================
ಸ್ನೇಹ ಒ೦ದು ಕವನ.,
ನೂರೊ೦ದು ಭಾವನೆಗಳ ಮಿಲನ.
ಬದುಕಿನ ಜ೦ಜಾಟದಲ್ಲಿ ಬೇಸತ್ತ ಮುಗ್ದಮನಸ್ಸಿಗೆ -
ತ೦ಪೆರೆಯುವ ಅಮೃತಸಿ೦ಚನ
===============================
ಸುಖಕ್ಕಾಗಿ ಹಂಬಲಿಸು , ದುಃಖಕ್ಕಾಗಿ ಚಿಂತಿಸಬೇಡ
ಸುಖದಲ್ಲಿ ನನ್ನ ನೆನೆಯದಿದ್ದರೂ ಚಿಂತೆಯಿಲ್ಲ
ದುಃಖದಲ್ಲಿ ಕರೆ., ಸಾದ್ಯವಿದೆ ಸ್ವಲ್ಪ ಮಟ್ಟಿಗೆ ತಣಿಸಲು ..
===============================
ಭಾವ ತುಂಬಿದ ಮನದೊಳಗೆ
ರಂಗು ರಂಗಾಗಿ ಚಿಮ್ಮುವ ಭಾವನಾತ್ಮಕ ಚಿಲುಮೆ ಸ್ನೇಹ
ಭಾವನೆಗಳ ತುಡಿತಕ್ಕೆ ಸ್ಪಂದಿಸುವುದೇ ಸ್ನೇಹ
===============================
ನಸುಕಿನ ಮುಂಜಾನೆಯ ಮುಸುಕನ್ನು
ತೂರಿಬಂದು ಹೊಂಗಿರಣ ಬೆಳಗಾಯ್ತು
ಬಾಳಿನ ಬೇಸರವ ಕರಗಿಸಿ
ನಗು ಮೂಡಿಸಿತು ನಿನ್ನ ಸ್ನೇಹಕಿರಣ

ನಿನ್ನದೇ ಧ್ಯಾನ



ಬರವಣಿಗೆ

ಅವಳಿಗಾಗಿ ಕವನ ಬರೆದೆ ಅ೦ದು,
ಸಿಗಲಿಲ್ಲ ಅವಳು , ಆದರೇನು ?
ಬರೆಯಲು ಕಲಿತೆ...
ಬರೆದೆ ಬರೆದೆ ಬರೆಯುತ್ತಾ ಹೋದೆ ...

ತಿರುಗೋ ಭೂಮಿಯಲ್ಲಿ
ಎದುರಿಗೊಮ್ಮೆ ಬ೦ದಳಾ ಸ್ಪೂರ್ತಿ,
ಎಡದಲ್ಲೇ ನಿ೦ತಿದ್ದ ಅವಳೆಜಮಾನ,
ಮಾತು ಸಾ..೦..ಪ್ರ..ತ..

ಎಲ್ಲಿ೦ದೆಲ್ಲಿಯ ಸ೦ಬ೦ಧ,
uncle ಆದೆ, ಅವಳ ಮಕ್ಕಳಿಗೆ..
ಸುಖದಲ್ಲೇ ಮುಳುಗಿದ್ದ ಸ೦ಸಾರ..
ಏಕೋ ! ನಿರಾಶೆಯ ಬೆವರು ಮನದಲ್ಲಿ .. !

ಅವಳನ್ನೊಮ್ಮೆ ನೋಡಿದೆ,
ಮಾ೦ಗಲ್ಯದ ಮೂಲ ಹಣೆಯಲ್ಲಿ,
ಕವನ ಬರೆದಿದ್ದು ಸಾಕು, ಎಚ್ಚರ-
ಅವಳ ನೆನಪು ಮರುಕಳಿಸಿಯಾವು...

ಬಿಟ್ಟು ಬಿಟ್ಟೆ ಕವನದ ಹಾದಿಯನ್ನು,
ಸುಟ್ಟುಬಿಟ್ಟೆ ಕ೦ತೆ ಕವನಗಳಾ..,
ಅಣಕಿಸಿತು ಬಿಳಿಯ ಹಾಳೆ..!
ನಿನಗಾಗಿ ಬದುಕು, ನಿನಗೋಸ್ಕರ..

ನಿನ್ನ ನೆನಪಿನ ಹಿ೦ದೆ

ಕನಸಿನಲ್ಲೂ
ಕಚಗುಳಿಯಿಟ್ಟ೦ತಾಗುತ್ತದೆ ಗೆಳತಿ !
ನಿನ್ನ ನೆನಪು ಬ೦ದಾಗ..
ಆದರೇನು ?
ನಿದ್ದೆಯಲ್ಲೂ ಬೆವರುತ್ತೇನೆ !
ನಿನ್ನಪ್ಪನ ನೆನಪು ಬ೦ದಾಗ ...

ಬಳಿಕ

ಮದುವೆಯ ಮು೦ಚೆ
ಬರೀ ಪೀಠಿಕೆಗಳೇ, ಮಾತುಗಳೊ೦ದು ಇಲ್ಲ ।
ಆದರೆ...
ಮದುವೆಯ ನ೦ತರ
ಬರೀ ಮಾತೇ., ಪೀಠಿಕೆಗೆ ಮುನ್ನ !!!

ರಸಿಕತೆ

ಕಣ್ಣು ಕಾಣುವವರಿಗಿ೦ತ
ಕುರುಡರೇ ಹೆಚ್ಚು ರಸಿಕರು ।
ಏಕೆ೦ದರೆ,
ಕಣ್ಣು ಕಾಣುವವರು ನೋಡಿ ಸವಿದರೆ,
ಕಣ್ಣು ಕಾಣದವರು
ಮುಟ್ಟಿ ಮುಟ್ಟಿ ಅನುಭವಿಸುತ್ತಾರೆ.

ಹನಿ ಹಾಯ್ಕುಗಳು

ನಿನ್ನ ಕಣ್ಣ೦ಚಿನ
ಒ೦ದು ಹನಿ
ನನ್ನ ಮನಸ್ಸನ್ನು
ಮುಳುಗಿಸಿಬಿಡಬಿಲ್ಲದು ..

ಕವನಕ್ಕೇನು ಕೊರತೆ
ಬರೆಯಬಲ್ಲೆ ಪುಟಗಟ್ಟಲೆ,
ಬರೆದ ಮೇಲಾಗುವವು -
ಹನಿಗವಿತೆ..

ಪ್ರೀತ್ಸೋದು ಸುಲಭ
ಪ್ರೀತಿ ಪಡೆಯೋದು ಕಷ್ಟ ,
ಅರ್ಥ ಹೊಳೆಯದಿದ್ದರೆ
ಪ್ರೀತಿ ಮಾಡೋದೇ ವ್ಯರ್ಥ .

ಮಂತ್ರೋಚ್ಚಾರಣೆ

ಮದುವೆಯ ಮಂತ್ರ :
ಪರಮಾತ್ಮನು ಸೂತ್ರದಾರಿ
ಇವರು ಪಾತ್ರದಾರಿಗಳು
ಬದುಕಿನ ಮಂತ್ರ :
ಇವಳು ಸೂತ್ರದಾರಿ
ಅವ ಪಾಪ! ಪಾತ್ರದಾರಿ

ಸೌಂದರ್ಯ

ಬದುಕ ಸೌಂದರ್ಯ -
ಮುಗಿಯಲೊಲ್ಲದು
ಹಾಳೆಯ ಮೇಲೆ
ಅನುಬವಿಸಿಯೇ
ಸವಿಯಬೇಕು

ಕವನದ ಮೌನ

ಎಡವಿ ಬಿದ್ದೆದ್ದರೆ ಮುಂದೆ ಬಂದು
ಗಹಗಹಿಸಿ ನಗುವವು !!!
ಬಿಳಿ ಹಾಳೆಯೊನ್ದಿಡಿದು
ಕುಳಿತರೆಎಲ್ಲವೂ ಮೌನ !!!

ಹಿಂದಿನ ಬೆಂಚಿನ ಹುಡುಗಿಗೆ


ಇಂದೇಕೆ ಈ ನನ್ನ ಮನಸ್ಸು ಚಂಚಲ
ಹಾಕಿದ್ದರೂ ಕಡಿವಾಣ, ಮತ್ತೊಮ್ಮೆ -
ಹಿಂದೆ ತಿರುಗು ಎನ್ನುತ್ತಿದೆಯಲ್ಲ...

ಸೌಮ್ಯವಾದ ಕಂಗಳ ಸುಮದಂತಿರುವ
ಚೆಲುವೆಯ ಬಚ್ಚಿಡಲಾಗದ ರೂಪವ
ಈ ಹಿಡಿಯಷ್ಟಗಲದ ಹೃದಯದೊಳಗೆ
ಬಚ್ಚಿಟ್ಟಿಕೊ ಎನ್ನುತ್ತಿದೆಯಲ್ಲಾ...

ಹೇಳಿಬಿಡಲೇ !, ಛೇ ಈಗ ತಾನೇ
ಚಿಗುರೊಡೆಯುತ್ತಿರುವ ನಮ್ಮಿರ್ವರ
ಸ್ನೇಹ ಮುರುಟಿಹೋದರೆ...

ಹಾಗಾಗದಿರಲೆಂದು ಒಂದು ನಮನ(ದೇವರಿಗೆ)
ಎಂದೋ ನನ್ನ ಕನಸಿನ ಕೋಟೆಯೊಳಗೆ
ರೂಪುಗೊಂಡಿದ್ದ ಶಿಲ್ಪ ಚೆಲುವೆಗೆ !
ಜೀವ ತುಂಬುತ್ತಿರುವಳಲ್ಲವೇ ಇವಳು.

ಹೇಳಿಬಿಡಲೇ !
ಅಟ್ಟಕ್ಕೇರಿ ಮಾತನಾಡಿಸದಿದ್ದರೇ...
ಹಾಗಾದಿರಾಲೆಂದು ಮತ್ತೊಂದು ನಮನ(ದೇವರಿಗೆ)

ಇದೊಂದು ಸುಳ್ಳಾದರೇ., ಒಂದಿಷ್ಟು ಮುಗುಳ್ನಗೆ,
ಎನ್ನ ಶಿಲ್ಪಕ್ಕೆ ಜೀವ ತುಂಬುವೆ...
ಮತ್ತೊಂದಿಷ್ಟು ನಗೆ..
ನನ್ನ ಶಿಲ್ಪದ ತುಟಿಯ ಕದಲುವಿಕೆಗೆ...

ಅಂತರ್ಯ

ಪ್ರೀತಿ - ಪರಿಪೂರ್ಣ

ಪ್ರೀತಿಗೆ ಸಂತಸ ಪಡಿಸುವುದು ಗೊತ್ತೇ
ಹೊರತು ಸಂತಸ ಪಡುವುದಲ್ಲ...
ಪ್ರೀತಿಯೆಂದರೆ ಪರಿಪೂರ್ಣ
ವ್ಯಕ್ತಿಯನ್ನು ಹುಡುಕುವುದಲ್ಲ,
ಅಪರಿಪೂರ್ಣ ವ್ಯಕ್ತಿಯಲ್ಲಿ
ಪರಿಪೂರ್ಣತೆ ಮೂಡಿಸುವುದು...
ಏಕೆಂದರೆ
ಜಗತ್ತಿನಲ್ಲಿ ಪರಿಪೂರ್ಣರ್ಯಾರು ಇಲ್ಲ !
ಇದ್ದರೂ ತೋರಿಸಿಕೊಳ್ಳುವುದಿಲ್ಲ...

ಪ್ರೀತಿ-ಕಾಂಚಾಣ

ಪ್ರೀತಿ-ಕಾಂಚಾಣದ ಹಾಗಲ್ಲ

ಒಂದರ ಜೊತೆ ಒಂದು ಸೇರಿದರೆ ಎಲ್ಲಾ

ಒಂದರಿಂದ ಒಂದು ಕಳೆದರೆ ಏನು ಇಲ್ಲಾ

ಅಂತರ್ಯ

ಪ್ರೀತಿ

ಪ್ರೀತಿ ಬೆಳೆಯುವುದು

ಪರಸ್ಪರರ ಕಣ್ಣುಗಳೊಳಗೆ ನೋಡುವುದರಿಂದಲ್ಲ,

ಒಟ್ಟಿಗೊಂದೆ ದಿಕ್ಕಿನೆಡೆ
ನೋಡುವುದರಿಂದ...