ಇದ್ಯಾತರ ನ್ಯಾಯ

ಸೆಳೆದುಕೊಂಡಿದೆ
ಪ್ರೀತಿಯೆಂಬ ಮಾಯೆ .. ?
'ಕಣ್ಕಾಣಿಸದ ಮನಸ್ಸನ್ನು' .,
ಬಿಡಿಸಿಕೊಡು ಗೆಳತಿ-
ಅರಿವಿಲ್ಲದೆ ತೊಡರಿ ಕೊಂಡೆನೆಂದರೆ -
ಮತ್ತಷ್ಟು ಬಿಗಿ ಮಾಡುವುದೇ !!!

ಚಿರಂಜೀವಿ

ಸತ್ತು ಹೋದಾವು -
ಭಾವನೆಗಳು ಎಂಬ
ಭಯಕ್ಕೆ ಬರೆಯುತ್ತಿದ್ದೆ ..
ಈಗೀಗ ಭಾವನೆಗಳೇ
ಉಕ್ಕುತ್ತವೆ ಸತ್ತು ಹೋದೇವು
ಎಂಬ ಭಯಕ್ಕೆ ...

ಅಲೆಮಾರಿ

ಮುರಿದ ಕನಸಿನ
ಚೂರುಗಳ ಹಿಡಿದು
ಬೀದಿ ಬೀದಿ ಅಲೆಯುತಿದ್ದೇನೆ .,
ನಿನ್ನ ಪ್ರತಿಬಿಂಬ ಕಾಣಿಸಿತೆಂಬ
ನಿರೀಕ್ಷೆಯಲ್ಲಿ ..

ಇಂತಿ ನಿನ್ನ ಪ್ರೀತಿಯ

ಬದುಕು ಖಾಲಿ ಕಾಗದವಲ್ಲ
ವಿಧಿ ಬರೆದರೆ ಉಂಟು
ಇಲ್ಲದಿದ್ದರೆ ಇಲ್ಲ

ಖಾಲಿ ಕಾಗದ

ಖಾಲಿ ಕಾಗದಕ್ಕೇನು ಗೊತ್ತು
ಚುಕ್ಕಿ ಇಟ್ಟರೂ ಮೈಲಿಗೆಯೇ ..!
ಚಿತ್ತಾರ ಬಿಡಿಸಿದರೂ ಮೈಲಿಗೆಯೇ..!
ಮಾಡಿಯಾದ ಕ್ಯೆಗಳ ಚಿತ್ತವಷ್ಟೇ ..

ಕುವೆಂಪು - ಭಾವಚಿತ್ರಗಳ ಸಂಕಲನ

ಭಾವನೆಗಳ ತುಡಿತ

ನೆನಪುಗಳ ಬೀದಿಯಲ್ಲಿ ಕಳೆದುಹೋಗಬೇಡ ಗೆಳತಿ
ಬೆಚ್ಚನೆಯ ಮನಸ್ಸಿದೆ.,
ಕನಸಾಗಬೇಡ ನನಸಾಗಿರು ನನ್ನ ಮುದ್ದು ಮನದಿ..
===============================
ಸ್ನೇಹ ಒ೦ದು ಕವನ.,
ನೂರೊ೦ದು ಭಾವನೆಗಳ ಮಿಲನ.
ಬದುಕಿನ ಜ೦ಜಾಟದಲ್ಲಿ ಬೇಸತ್ತ ಮುಗ್ದಮನಸ್ಸಿಗೆ -
ತ೦ಪೆರೆಯುವ ಅಮೃತಸಿ೦ಚನ
===============================
ಸುಖಕ್ಕಾಗಿ ಹಂಬಲಿಸು , ದುಃಖಕ್ಕಾಗಿ ಚಿಂತಿಸಬೇಡ
ಸುಖದಲ್ಲಿ ನನ್ನ ನೆನೆಯದಿದ್ದರೂ ಚಿಂತೆಯಿಲ್ಲ
ದುಃಖದಲ್ಲಿ ಕರೆ., ಸಾದ್ಯವಿದೆ ಸ್ವಲ್ಪ ಮಟ್ಟಿಗೆ ತಣಿಸಲು ..
===============================
ಭಾವ ತುಂಬಿದ ಮನದೊಳಗೆ
ರಂಗು ರಂಗಾಗಿ ಚಿಮ್ಮುವ ಭಾವನಾತ್ಮಕ ಚಿಲುಮೆ ಸ್ನೇಹ
ಭಾವನೆಗಳ ತುಡಿತಕ್ಕೆ ಸ್ಪಂದಿಸುವುದೇ ಸ್ನೇಹ
===============================
ನಸುಕಿನ ಮುಂಜಾನೆಯ ಮುಸುಕನ್ನು
ತೂರಿಬಂದು ಹೊಂಗಿರಣ ಬೆಳಗಾಯ್ತು
ಬಾಳಿನ ಬೇಸರವ ಕರಗಿಸಿ
ನಗು ಮೂಡಿಸಿತು ನಿನ್ನ ಸ್ನೇಹಕಿರಣ

ನಿನ್ನದೇ ಧ್ಯಾನ



ಬರವಣಿಗೆ

ಅವಳಿಗಾಗಿ ಕವನ ಬರೆದೆ ಅ೦ದು,
ಸಿಗಲಿಲ್ಲ ಅವಳು , ಆದರೇನು ?
ಬರೆಯಲು ಕಲಿತೆ...
ಬರೆದೆ ಬರೆದೆ ಬರೆಯುತ್ತಾ ಹೋದೆ ...

ತಿರುಗೋ ಭೂಮಿಯಲ್ಲಿ
ಎದುರಿಗೊಮ್ಮೆ ಬ೦ದಳಾ ಸ್ಪೂರ್ತಿ,
ಎಡದಲ್ಲೇ ನಿ೦ತಿದ್ದ ಅವಳೆಜಮಾನ,
ಮಾತು ಸಾ..೦..ಪ್ರ..ತ..

ಎಲ್ಲಿ೦ದೆಲ್ಲಿಯ ಸ೦ಬ೦ಧ,
uncle ಆದೆ, ಅವಳ ಮಕ್ಕಳಿಗೆ..
ಸುಖದಲ್ಲೇ ಮುಳುಗಿದ್ದ ಸ೦ಸಾರ..
ಏಕೋ ! ನಿರಾಶೆಯ ಬೆವರು ಮನದಲ್ಲಿ .. !

ಅವಳನ್ನೊಮ್ಮೆ ನೋಡಿದೆ,
ಮಾ೦ಗಲ್ಯದ ಮೂಲ ಹಣೆಯಲ್ಲಿ,
ಕವನ ಬರೆದಿದ್ದು ಸಾಕು, ಎಚ್ಚರ-
ಅವಳ ನೆನಪು ಮರುಕಳಿಸಿಯಾವು...

ಬಿಟ್ಟು ಬಿಟ್ಟೆ ಕವನದ ಹಾದಿಯನ್ನು,
ಸುಟ್ಟುಬಿಟ್ಟೆ ಕ೦ತೆ ಕವನಗಳಾ..,
ಅಣಕಿಸಿತು ಬಿಳಿಯ ಹಾಳೆ..!
ನಿನಗಾಗಿ ಬದುಕು, ನಿನಗೋಸ್ಕರ..

ನಿನ್ನ ನೆನಪಿನ ಹಿ೦ದೆ

ಕನಸಿನಲ್ಲೂ
ಕಚಗುಳಿಯಿಟ್ಟ೦ತಾಗುತ್ತದೆ ಗೆಳತಿ !
ನಿನ್ನ ನೆನಪು ಬ೦ದಾಗ..
ಆದರೇನು ?
ನಿದ್ದೆಯಲ್ಲೂ ಬೆವರುತ್ತೇನೆ !
ನಿನ್ನಪ್ಪನ ನೆನಪು ಬ೦ದಾಗ ...