ಸಾಲು ಸಾಲು ಮಾವಿನ ತೋಪಿಗೆ
ವಸಂತ ಮುತ್ತಿಕ್ಕಿ ಮೊಗ್ಗರಳಿಸಿದಾಗ
ರತಿಲಾಲಾಪನೆ ಕೋಗಿಲೆಯದು...
ಅಂದಕಾರದ ಅಂತರಾಳದಿಂದ -
ವೀಣೆ ಮೀಟಿದಂತ ಶಬ್ದ..
ವಿರಹ ವೇದನೆಯೋ .. ಅದುಮಿಟ್ಟ -
ಬಾವನೆಗಳ ಸುರಿಮಳೆಯೋ...
ವಸಂತನೆಡೆಗೆ ಉಲಿಯುವುದು
ಕೋಗಿಲೆ ಕಾನನದಲ್ಲಿ..
'ನನ್ನ ಪ್ರೀತಿ ನೀನೆಂದು'..
ಹರೆಯಕ್ಕೆ ಕಿಚ್ಚಿಟ್ಟ ದಿನವೇ,
ಹೃದಯದಿ ಬಚ್ಚಿಟ್ಟವ ನಾ..
ನನಗೆಲ್ಲಿ ಬರಬೇಕು ?,
ಕೋಗಿಲೆಯ ಸಹನೆ, ತಾಳ್ಮೆ...
ಕೋಗಿಲೆಗೆ ವರುಷಕ್ಕೊಮ್ಮೆ ಪ್ರೀತಿಯ ನೆನಪು
ವಸಂತ ಚಿಗುರಿದಾಗ, ಮೊಗ್ಗರಳಿಸಿದಾಗ..
ನನ್ನ ಮನ ಹಾಗಲ್ಲ .. !
ಮಳೆ ನಿಂತಿದ್ದಕ್ಕೂ, ಕೆರೆ ಕೊಳ ತುಂಬಿದ್ದಕ್ಕೂ..
ಬಾರವಾಗುವುದು ಹೃದಯ -
ನಿನ್ನ ನೆನಪಿಸುತ್ತಾ..
ಸೌಂದರ್ಯಕ್ಕೆ ಪೃಜ್ಞೆ ಇದ್ದಿದ್ದರೆ
ವಸಂತ ಬರುತ್ತಿರಲಿಲ್ಲ ವರ್ಷಕ್ಕೊಮ್ಮೆ..
ಪ್ರತಿನಿತ್ಯ ವಸಂತದ ತುಂತುರು !,
ಕೋಗಿಲೆಯಾಲಾಪನೆ ಪ್ರತಿಕ್ಷಣ !,
ಪ್ರೇಮಿಗಳ ಹಾಡು ನಿತ್ಯನೂತನ..
ಆದರೆ ಇಹ ಗುರುತಿಸಿದ್ದೊಂದೇ ದಿನ...
ಪ್ರೇಮಯಾಚಿಸಲಿಕ್ಕೆ., ನೀಡಲಿಕ್ಕೆ.,
Happy Valentine Day
ಪ್ರೀತಿ ಶಾಶ್ವತ ಗೆಳತಿ..
ಕೋಗಿಲೆಯ ಕಲರವದ ಹಾಗೆ..
ಪ್ರೀತಿಯ ಉತ್ತುಂಗ ಅರಿಯೆ ನಾ..
ನಾಂದಿ ಹಾಡುವ ಅನುಭವ ಮಾತ್ರ..
ಮುಗಿಯಲೊಲ್ಲದು ನಿನ್ನೆಡೆಗಿನ ಪ್ರೀತಿ
ಮುಗಿದಾಗ ಬಣ್ಣಗೆಟ್ಟ ರಕ್ತ
ಅಪ್ಪುವುದು ನೀಲಿ...
ಇಂತಿ ನಿನ್ನ ಪ್ರೀತಿಯ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ